Monthly Archives: January 2022

🌸🌼ಸೂಳ್ನುಡಿ🌼🌸

*ಜರಾ ರೂಪಂ ಹರತಿ ಹಿ ಧೈರ್ಯಮಾಶಾ* *ಮೃತ್ಯುಃ ಪ್ರಾಣಾನ್ ಧರ್ಮಚರ್ಯಾಮಸೂಯಾ|* *ಕ್ರೋಧಃ ಶ್ರೀಯಂ ಶೀಲಮನಾರ್ಯಸೇವಾ* *ಹ್ರಿಯಂ ಕಾಮಃ ಸರ್ವಮೇವಾಭಿಮಾನಃ ||* (ಮಹಾಭಾರತ) ಮುಪ್ಪು ರೂಪವನ್ನೂ, ಆಸೆ ಧೈರ್ಯವನ್ನೂ, ಮೃತ್ಯು ಪ್ರಾಣವನ್ನೂ, ಅಸೂಯೆ ಧರ್ಮಾನುಷ್ಠಾನವನ್ನೂ, ಕ್ರೋಧ ಸಂಪತ್ತನ್ನೂ, ಅನಾರ್ಯಸೇವೆ ಶೀಲವನ್ನೂ, ಕಾಮವು ಲಜ್ಜೆಯನ್ನೂ, ಅಭಿಮಾನ (ದುರಹಂಕಾರ) ಇವೆಲ್ಲವನ್ನೂ ನಾಶಪಡಿಸುತ್ತದೆ. *🌷🌺🙏ಶುಭದಿನವಾಗಲಿ!🙏🌺🌷*

View More

ಪಂಚಾಂಗವೆಂದರೇನು

ಪಂಚಾಂಗವೆಂದರೆ ಐದು ಅಂಗಗಳು . ವಾರ, ತಿಥಿ, ನಕ್ಷತ್ರ, ಯೋಗ, ಮತ್ತು ಕರಣಗಳೇ ಆ ಐದು ಅಂಗಗಳು ಪಂಚಾಂಗ ಭಾರತೀಯರ ವೈಗ್ನಾನಿಕ ಕಾಲಗಣನೆಯ ಕ್ಯಾಲೆಂಡರ್ ಹೊರತು ಧಾರ್ಮಿಕ ಗ್ರಂಥವಲ್ಲ 2)ಮಹೂರ್ತ ಎಂದರೇನು? ಮಹೂರ್ತ ಎಂದರೆ ಸಮಯ ಗಂಟೆಯೆಂದು ಅರ್ಥೈಸಬಹುದು 30ಕಲೆಗಳು ಸೇರಿದರೆ 1ಮಹೂರ್ತವಾಗುತ್ತದೆ. 30ಕಾಷ್ಠಾಗಳು ಸೇರಿದರೆ 1ಕಲೆಯಾಗುತ್ತದೆ. 18 ನಿಮಿಷಗಳು ಸೇರಿದರೆ 1ಕಾಷ್ಠಾ ಆಗುತ್ತದೆ. 3) ತಿಥಿ ಎಂದರೇನು ? ತಿಥಿಯೆಂದರೆ ದಿವಸ 30 ಮಹೂರ್ತಗಳು ಸೇರಿ ದಿವಸ ಅಹೋರಾತ್ರ 4) ವಾರಯೆಂದರೇನು? ಏಳು ಗ್ರಹಗಳ ಹೆಸರನ್ನೊಳಗೊಂಡ […]

View More

ಮಂಕುತಿಮ್ಮನ ಕಗ್ಗ – ದಿನಕ್ಕೊಂದು ಕಗ್ಗ ೫

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? । ನಾವರಿಯಲಾರದೆಲ್ಲದರೊಟ್ಟು ಹೆಸರೆ? ॥ ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? । ಸಾವು ಹುಟ್ಟುಗಳೆನು? – ಮಂಕುತಿಮ್ಮ ॥ ೫ ॥ ದೇವರೆಂಬುದು ಅದೇನು ಕಗ್ಗತ್ತಲ ಗವಿಯೆ?. ನಾವರಿಯಲಾರದ ಎಲ್ಲದರ ಒಟ್ಟು ಹೆಸರೇ? ಕಾವನು(=ಕಾಯುವವನು) ಓರ್ವನು(=ಒಬ್ಬನು) ಇರಲ್ಕೆ( =ಇರಲು) ಜಗದ ಕಥೆಯು ಏಕಿಂತು? ಸಾವು ಹುಟ್ಟುಗಳೇನು? – ಮಂಕುತಿಮ್ಮ.   ಮಾನವನಿಗೆ ಯೋಚಿಸುವ ಶಕ್ತಿ ಬಂದಾಗಿನಿಂದ ಇದೊಂದು ಕಾಡುವ ಪ್ರಶ್ನೆ. ಅಂದು ಮನುಷ್ಯ ಕಾಡಿನಲ್ಲಿ ಅಲೆಮಾರಿಯಾಗಿದ್ದ. ಕೈಗೆ ಸಿಕ್ಕದ್ದನ್ನು ತಿಂದು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಹೋರಾಡುತ್ತಿದ್ದ. ಆಗ […]

View More

ಮಂಕುತಿಮ್ಮನ ಕಗ್ಗ – ದಿನಕ್ಕೊಂದು ಕಗ್ಗ 4

ಏನು ಜೀವನದರ್ಥ? ಏನು ಪ್ರಪಂಚಾರ್ಥ? । ಏನು ಜೀವಪ್ರಪಂಚಗಳ ಸಂಬಂಧ? ॥ ಕಾಣದಿಲ್ಲಿ‍ರ್ಪುದೇನಾನುಮುಂಟೆ? ಅದೇನು? । ಜ್ಞಾನಪ್ರಮಾಣವೇಂ? – ಮಂಕುತಿಮ್ಮ ॥ ೪ ॥ ಕಾಣದಿಲ್ಲಿರ್ಪುದೇನಾನುಮುಂಟೆ = ಕಾಣದೆ + ಇಲ್ಲಿ+ ಇರ್ಪುದು(ಇರುವುದು)+ಏನಾನುಂ( ಏನಾದರೂ)+ ಉಂಟೆ “ಈ ನಮ್ಮ ಜೀವನಕ್ಕೆ ಏನಾದರೂ ಅರ್ಥ ಇದೆಯೇ? ನಾವಿರುವ ಈ ಪ್ರಪಂಚದ ಅರ್ಥವೇನು? ನಮ್ಮ ಮತ್ತು ನಾವು ಇರುವ ಈ ಪ್ರಪಂಚದ ಪರಸ್ಪರ ಸ೦ಬ೦ಧವೇನು? ಇವೆರಡನ್ನೂ ಬೆಸೆದಿರುವ, ನಮ್ಮ ಕಣ್ಣಿಗೆ ಕಾಣದ ಒಂದು ಶಕ್ತಿ ಏನಾದರೂ ಇದೆಯೇ? ಹಾಗಿದ್ದರೆ ಅದೇನು? […]

View More

ಮಂಕುತಿಮ್ಮನ ಕಗ್ಗ – ದಿನಕ್ಕೊಂದು ಕಗ್ಗ 0೩

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ। ಮಹಿಮೆಯಿಂ ಜಗವಾಗಿ ಜೀವವೇಷದಲಿ ॥ ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ । ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ ॥ ೩ ॥ ತಿಳಿಯಗೊಡದೊಂದು=ತಿಳಿಯಗೊಡದ ಒಂದು ವಿಹರಿಪುದದೊಳ್ಳಿತೆಂಬುದು = ವಿಹರಿಪುದು ( ವಿಹಾರ ಮಾಡುವುದು) +ಅದು+ಒಳ್ಳಿತು = ಒಳ್ಳೆಯದು +ಎಂಬುದು ನಿಸದವಾದೊಡಾ = ನಿಸದವಾದೊಡೆ + ಆ ವಿಹಾರಮಾಡುವುದು ಎಂದರೆ, ಎಲ್ಲದರಲ್ಲೂ ವ್ಯಾಪಕವಾಗಿ ಚೈತನ್ಯ ರೂಪದಲ್ಲಿರುವುದು ಎಂದೂ ಅರ್ಥೈಸಬಹುದು. ನಿಸದವಾದೊಡೆ ಎಂದರೆ ನಿಜವಾದರೆ ಎಂದೇ ಅರ್ಥೈಸಬೇಕು. ಮಾನವರಲ್ಲಿ ಇದು ಒಂದು ನಿರಂತರ ಪ್ರಶ್ನೆ. […]

View More

ಮಂಕುತಿಮ್ಮನ ಕಗ್ಗ — ದಿನಕ್ಕೊಂದು ಕಗ್ಗ 02

ಜೀವ ಜಡರೂಪ ಪ್ರಪಂಚವನದಾವುದೋ। ಆವರಿಸಿಕೊಂಡುಮೊಳನೆರೆದುಮಿಹುದಂತೆ॥ ಭಾವಕೊಳಪಡದಂತೆ ಅಳತೆಗಳವಡದಂತೆ। ಆ ವಿಶೇಷಕೆ ನಮಿಸೊ – ಮಂಕುತಿಮ್ಮ ॥ ೨ ॥ (ಜೀವ ಜಡ ರೂಪ ಪ್ರಪಂಚವನು ಅದಾವುದೋ ಆವರಿಸಿಕೊಂಡು ಒಳನೆರೆದು ಇಹುದಂತೆ ಭಾವಕ್ಕೆ ಒಳಪಡದಂತೆ ಅಳತೆಗೆ ಅಳವಡದಂತೆ ಆ ವಿಶೇಷಕೆ ಮಣಿಯೋ- ಮಂಕುತಿಮ್ಮ )(ಒಳನೆರೆದು=ಒಳಗೆ ತುಂಬಿ , ಅಳವಡದಂತೆ = ಸಿಕ್ಕದಂತೆ, ಇಹುದಂತೆ = ಇದೆಯಂತೆ) ಈ ಪ್ರಪಂಚದಲ್ಲಿ ಇರುವುದು ಎರಡೇ. ಒಂದು ಜಡ ಮತ್ತು ಮತ್ತೊಂದು ಜೀವ. ಜಡವೆಂದರೆ ಚೇತನವಿಲ್ಲದ್ದು. ಜೀವವೆಂದರೆ ಚೇತನ . ಇವೆರಡರ ಸಮ್ಮಿಲನವೇ ಜಗದ್ವ್ಯಾಪಾರ ಇವೆರಡರಲ್ಲೂ […]

View More

ಮಂಕುತಿಮ್ಮನ ಕಗ್ಗ — ದಿನಕ್ಕೊಂದು ಕಗ್ಗ 01

ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ । ದೇವ ಸರ್ವೇಶ ಪರಬೊಮ್ಮನೆಂದು ಜನಂ ॥ ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ । ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ ॥ ೧ ॥ ವಿಶ್ವಕ್ಕೆ ಮೂಲವಾದ ಶ್ರೀ ವಿಷ್ಣು, ಮಾಯಾಲೋಲ, ದೇವರು, ಪರಬ್ರಹ್ಮ, ಸರ್ವಕ್ಕೂ ಒಡೆಯನಾದ ಪರಮ ಪುರುಷ ಹೀಗೆ ಹತ್ತು ಹಲವಾರು ಹೆಸರುಗಳಿಂದ ಯಾವುದನ್ನು ಜನರು ಕಾಣದಿದ್ದರೂ ಪ್ರೀತಿ ಮತ್ತು ಭಕ್ತಿಯಿಂದ ನಂಬಿರುವರೋ ಆ ವಿಚಿತ್ರಕ್ಕೆ ನಮಿಸು ಎಂದು ಹೇಳುತ್ತಾರೆ ಶ್ರೀ ಗುಂಡಪ್ಪನವರು. ನಾವಿರುವ ಭೂಮಿಯಂತಹ 9 […]

View More
Call Now Button