*ಜರಾ ರೂಪಂ ಹರತಿ ಹಿ ಧೈರ್ಯಮಾಶಾ*
*ಮೃತ್ಯುಃ ಪ್ರಾಣಾನ್ ಧರ್ಮಚರ್ಯಾಮಸೂಯಾ|*
*ಕ್ರೋಧಃ ಶ್ರೀಯಂ ಶೀಲಮನಾರ್ಯಸೇವಾ*
*ಹ್ರಿಯಂ ಕಾಮಃ ಸರ್ವಮೇವಾಭಿಮಾನಃ ||*
(ಮಹಾಭಾರತ)
ಮುಪ್ಪು ರೂಪವನ್ನೂ, ಆಸೆ ಧೈರ್ಯವನ್ನೂ, ಮೃತ್ಯು ಪ್ರಾಣವನ್ನೂ, ಅಸೂಯೆ ಧರ್ಮಾನುಷ್ಠಾನವನ್ನೂ, ಕ್ರೋಧ ಸಂಪತ್ತನ್ನೂ, ಅನಾರ್ಯಸೇವೆ ಶೀಲವನ್ನೂ, ಕಾಮವು ಲಜ್ಜೆಯನ್ನೂ, ಅಭಿಮಾನ (ದುರಹಂಕಾರ) ಇವೆಲ್ಲವನ್ನೂ ನಾಶಪಡಿಸುತ್ತದೆ.
*🌷🌺🙏ಶುಭದಿನವಾಗಲಿ!🙏🌺🌷*