ಶ್ರೀ ಜ್ಯೋತಿಷ್ಮತಿಗೆ ಸ್ವಾಗತ
“ಜಗದ ಬೆಳಕಿಗೆ ಸೂರ್ಯ ಬೇಕು. ಬದುಕಿನ ಬೆಳಕಿಗೆ ಭವಿಷ್ಯದ ಅರಿವಿರಬೇಕು”
ಜ್ಯೋತಿಷ್ಯ ಶಾಸ್ತ್ರವೆಂದರೆ ಮಾನವನ ಸುಮಧುರ ಬದುಕಿಗಾಗಿ ಅವರ ಸಮಸ್ಯೆಗಳಿಗೆ ಪರಿಹಾರಗಳ ಸಂಗ್ರಹ
ಜಾತಕವೆಂದರೆ ಮಗುವಿನ ಜನನ ಕಾಲದಲ್ಲಿ ಆಕಾಶ ಕಾಯಗಳು (ಸೂರ್ಯ – ಚಂದ್ರಾದಿ ನವಗ್ರಹಗಳು) ಇದ್ದ ನಿರ್ದಿಷ್ಟ ಸ್ಥಾನವನ್ನು ದೃಢೀಕರಿಸುವ ನಕ್ಷೆ. ಜನನದಿಂದ – ಮರಣದವರೆಗೆ ಮಾನವನ ಆಗುಹೋಗುಗಳನ್ನು ಜನ್ಮದ ಕರ್ಮಶೇಷ ಫಲಗಳನ್ನು ತಿಳಿಸುವುದೇ ಜ್ಯೋತಿಷ್ಯ.
ನಮ್ಮ ಸೇವೆಗಳು
ಪೂರ್ವಜನ್ಮ ಕೃತಂ ಪಾಪಂ ವ್ಯಾಧಿರೂಪೇಣ ಬಾಧತೇ|
ತಚ್ಛಾಂತಿಃ ಔಷಧೈಃ ದಾನೈಃ ಜಪ ಹೋಮ ಸುರಾರ್ಚನೈಃ||
ಪೂರ್ವಜನ್ಮದಲ್ಲಿ ಮಾಡಿದಂತಹ ಪಾಪಕರ್ಮ ಆದಿ -ವ್ಯಾಧಿ ರೂಪದಲ್ಲಿ ಪೀಡಿಸುತ್ತದೆ. ಅಂತಹ ರೋಗ ಉಪದ್ರವಗಳ ಪರಿಹಾರಕ್ಕಾಗಿ, ಔಷಧ ಉಪಚಾರ, ದಾನ, ಹೋಮ, ದೇವರ ಆರಾಧನೆಗಳನ್ನು ಮಾಡಬೇಕೆಂದು ಋಷಿಮುನಿಗಳು ತಿಳಿಸಿರುತ್ತಾರೆ.
ಆಧುನಿಕ ವಾದಂತಹ ಜಗತ್ತಿನಲ್ಲಿ ಜನರು ತಮ್ಮ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಮಾಡಿದಂತಹ ಪಾಪ ಕರ್ಮದಿಂದ ಮುಕ್ತಿಯನ್ನು ಹೊಂದಲು ವೇದೋಕ್ತ ವಾದಂತಹ ಮಾರ್ಗದಲ್ಲಿ ನಡೆದು ದೇವತಾ ಆರಾಧನೆಯನ್ನು ಯಜ್ಞಯಾಗಾದಿಗಳನ್ನು ಮಾಡುವುದರಿಂದ ಬರುವ ಸಂಕಷ್ಟಗಳಿಗೆ ಮುಕ್ತಿಯ ಮಾರ್ಗವಾಗಿದೆ
ಮೂರ್ತಿತ್ವೇ ಪರಿಕಲ್ಪಿತಃ ಶಶಭೃತೋ ವರ್ತ್ಮಾ ಪುನರ್ಜನ್ಮನಾ ಮಾತ್ಮೇತ್ಯಾತ್ಮವಿದಾಂ ಕ್ರತುಶ್ಚ ಯಜತಾಂ ಭರ್ತಾಮರಜ್ಯೋತಿಷಾಂ|
ಲೋಕಾನಾಂ ಪ್ರಲಯೋದಯಸ್ಥಿತಿವಿಭುಶ್ಚಾನೇಕಧಾ ಯಃ ಶ್ರುತೌ ವಾಚಂ ನಃ ಸ ದದಾತ್ವನೇಕಕಿರಣಸ್ತ್ರೈಲೋಕ್ಯದೋಪೋರವಿಃ||
ಯಾರು ತನ್ನ ಕಿರಣ ಜಾಲ ಗಳಿಂದ ಚಂದ್ರಮನು ಪ್ರಕಾಶಿಸುವಂತೆ ಮಾಡಿ ಚಂದ್ರ ಗೋಲಕ್ಕೊಂದು ಸ್ವರೂಪವನ್ನು ಕಲ್ಪಿಸಿದರನೋ, ಪೂರ್ವಜನ್ಮವಿಲ್ಲದ ಮೋಕ್ಷವನ್ನು ಬಯಸುವ ಸ್ಥಾನಕ್ಕೊಂದು ಮಾರ್ಗವನ್ನು ತೋರಿಸಿ ಕೊಡುವನೊ, ತತ್ವಜ್ಞಾನಿ ಗಳಿಗೆ ಜ್ಞಾನ ಸ್ವರೂಪನಾಗಿರುವನೋ, ವೇದೋಕ್ತ ಕರ್ಮಾಂಗದಲ್ಲಿ ಆಸಕ್ತರಾಗಿರುವ ಜನರಿಗೆ ಯಜ್ಞ ಸ್ವರೂಪಿಯೂ, ದೇವತೆಗಳ ಗ್ರಹ-ನಕ್ಷತ್ರಗಳ ಸ್ವಾಮಿಯೋ, ಲೋಕಗಳ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣಿಕರ್ತನೋ, ವೇದಗಳಲ್ಲಿ ಹಲವು ವಿಧದಲ್ಲಿ ವರ್ಣಿಸಲ್ಪಟ್ಟ ಮೂರುಲೋಕ ಗಳಿಗೆ ದಿವ್ಯ ಸ್ವರೂಪನಾಗಿ, ಪ್ರಕಾಶ ಗೊಳಿಸುವ ಭಗವಾನ್ ಸೂರ್ಯದೇವರಿಗೆ ನಮಸ್ಕಾರ. ನಮಗೆ ದಯಪಾಲಿಸಲಿ..
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇತ್
ಬದುಕಿರುವವರೆಗೂ ನಿಯತವಾದ ಕರ್ಮಗಳನ್ನು ಆಚರಿಸಬೇಕು ಇದು ಕರ್ಮಭೂಮಿ ವಿಹಿತವಾದ ಕರ್ಮವನ್ನು ಮಾಡಿದರೆ ಮಾತ್ರ ಈ ಲೋಕದಲ್ಲಿ ವ್ಯವಸ್ಥಿತವಾಗಿ ಜೀವಿಸಲು ಸಾಧ್ಯ ಇಲ್ಲದೇ ಹೋದಲ್ಲಿ ಸರಿಯಾಗಿ ಬದುಕಲು ಸಾಧ್ಯವಿಲ್ಲ.
ಶರೀರ ಯಾತ್ರಾ ಪಿ ಚ ತೇ ನ ಪ್ರಸಿಧ್ಯೇದಕರ್ಮಣ: